ನಮ್ಮದು ರೈತರ ಸರ್ಕಾರ, ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ರಾಜ್ಯದ ರೈತರಿಗೆ ಭಾರಿ ನೆರವಿನ ಮೊತ್ತವನ್ನು ಅವರವರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ. ನಮ್ಮದು ಮಾತನಾಡುವುದಲ್ಲ, ಮಾಡಿ ತೋರಿಸುವ ಸರ್ಕಾರ. ನಾವು ಮಾಡಿರುವ ಕೆಲಸವೇ ನಮ್ಮ ಗ್ಯಾರಂಟಿ ಘೋಷಣೆ, ಆಶ್ವಾಸನೆ, ಸುಳ್ಳು ಹೇಳುವುದು, ಮೋಸಮಾಡುವುದು ನಮ್ಮ ಗ್ಯಾರಂಟಿಯಲ್ಲ.